ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

 

ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ,(ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ) ಬೆಂಗಳೂರು.

ವಿಕ್ಟೋರಿಯ ಆಸ್ಪತ್ರೆ ಆವರಣ ಕೆ.ಆರ್.ರಸ್ತೆ.ಬೆಂಗಳೂರು-560 002.

---------------------------------------------------------------------------------------------------------------------

 

ಬಿಎಂಸಿಆರ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (ಪಿಎಂಎಸ್ಎಸ್ವೈ) ಬಗ್ಗೆ ಸಂಕ್ಷಿಪ್ತ ಟಿಪ್ಪಣಿ :-

 

 

ಯೋಜನೆ ಹಿನ್ನಲೆ :-

 

  1) ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ (ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ)ಯನ್ನು 2006 -2007ರ ಆರ್ಥಿಕ ವರ್ಷದಲ್ಲಿ ಮಂಜೂರಾದ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ತೃತೀಯ ಆರೋಗ್ಯ ವಿಶೇಷತೆಯನ್ನು ನವೀಕರಿಸಲು ಮತ್ತು ದೇಶಾದ್ಯಂತ ವಿಶೇಷ / ಅತೀ ವಿಶೇಷ ವಿಭಾಗಗಳಲ್ಲಿ ಗುಣಮಟ್ಟದ ವೈದ್ಯಕೀಯ ಶಿಕ್ಷಣವನ್ನು ನೀಡಲು ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಯವರು ಪ್ರಾರಂಭಿಸಿದ್ದಾರೆ.

 

  2) ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ)ಯನ್ನು ಗೌರವಾನ್ವಿತ ಕೇಂದ್ರ ಆರೋಗ್ಯ ಸಚಿವರಾದ ಶ್ರೀ. ಗುಲಾಮ್ ನಬಿ ಆಜಾದ್ ಅವರು ಆಗಸ್ಟ್ 18, 2012 ರಂದು ಅಧಿಕೃತವಾಗಿ ಉದ್ಘಾಟಿಸಿದರು ಮತ್ತು ಕರ್ನಾಟಕದ ರೋಗಿಗಳಿಗೆ ಉನ್ನತ ಗುಣಮಟ್ಟದ ಚಿಕಿತ್ಸೆಯನ್ನು ವಿಶೇಷವಾಗಿ ಬಡ ರೋಗಿಗಳಿಗೆ ಅತ್ಯಂತ ಕಡಿಮೆ ದರದಲ್ಲಿ ಅಥವಾ ಕೈಗೆಟುಕುವ ದರದಲ್ಲಿ ಮುಖ್ಯವಾಗಿ ಕರ್ನಾಟಕ ಸರ್ಕಾರ ಮತ್ತು ಭಾರತ ಸರ್ಕಾರ ಪ್ರಾರಂಭಿಸಿದ ವಿವಿಧ ಆರೋಗ್ಯ ವಿಮಾ ಯೋಜನೆಯಡಿ ಬರುವ ರೋಗಿಗಳಿಗೆ ಸಮರ್ಪಿಸಲಾಯಿತು.

 

  3) ಬಿಎಂಸಿ&ಆರ್‌ಐ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ(ಪಿಎಂಎಸ್‌ಎಸ್‌ವೈ)ಯು ಮೇ 2016 ರಲ್ಲಿ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾದ ಆಸ್ಪತ್ರೆಗಳು ಮತ್ತು ಆರೋಗ್ಯ ಸೇವೆಯನ್ನು ಒದಗಿಸುವ ರಾಷ್ಟ್ರೀಯ ಮಾನ್ಯತಾ ಮಂಡಳಿ (ಎನ್ಎಬಿಹೆಚ್‌) ನಿಂದ ಮಾನ್ಯತೆಯನ್ನು ಪಡೆದಿರುತ್ತದೆ.

 

 4) ಈ ಯೋಜನೆಯ ಮುಖ್ಯ ಉದ್ದೇಶ ದೇಶದ ಎಲ್ಲಾ ಭಾಗಗಳಿಗೂ ಸರ್ಕಾರದವತಿಯಿಂದ ಅತ್ಯುತ್ತಮ ಆರೋಗ್ಯ ರಕ್ಷಣೆ ಮತ್ತು ಚಿಕಿತ್ಸೆಗೆ ಬೇಕಾಗುವ ಸವಲತ್ತುಗಳಿಗೆ ನೆರವು ನೀಡುವುದು. ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಗೆ ಒತ್ತು ನೀಡುವುದು.

  

ಈ ನಿಟ್ಟಿನಲ್ಲಿ ದೆಹಲಿಯ ಅಖಿಲ ಭಾರತ ವೈದ್ಯಕೀಯ ಸಂಸ್ಥೆಯನ್ನು ಮಾದರಿಯನ್ನಾಗಿರಿಸಿ ಮೊದಲ ಹಂತದಲ್ಲಿ 6 ಸಂಸ್ಥೆಯನ್ನು ಹೊಸದಾಗಿ ಸ್ಥಾಪಿಸುವುದು ಮತ್ತು ಈಗಾಗಲೇ ಅಸ್ಥಿತ್ವದಲ್ಲಿರುವ 13 ಸಂಸ್ಥೆಗಳನ್ನು ಉನ್ನತೀಕರಣಿಸುವುದು.

 • ಈ 13 ಸಂಸ್ಥೆಗಳಲ್ಲಿ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯವನ್ನು ಕರ್ನಾಟಕದಲ್ಲಿ ಆಯ್ಕೆ ಮಾಡಿಕೊಳ್ಳಲಾಯಿತು.
 • ರಾಜ್ಯ ಸರ್ಕಾರ ಈ ಬಗ್ಗೆ ಒಂದು ರೂಪುರೇಶೆಯನ್ನು ತಯಾರಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು.

 

 

ಇದರ ಪ್ರಕಾರ:–

 

1) ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ (ಪಿಎಂಎಸ್ಎಸ್‌ವೈ)ನ ಎಲ್ಲಾ ಕ್ಲಿನಿಕಲ್‌ ಹಾಗೂ ನಾನ್‌ ಕ್ಲಿನಿಕಲ್‌ ವಿಭಾಗವನ್ನು ಆಧುನೀಕರಣಗೊಳಿಸುವುದು.

 

2) ಸಂಸ್ಥೆಗೆ ಹೊಂದಿಕೊಂಡಿರುವ ವಿಕ್ಟೋರಿಯ ಆಸ್ಪತ್ರೆ, ವಾಣಿ ವಿಳಾಸ ಆಸ್ಪತ್ರೆ, ಬೌರಿಂಗ್‌ ಮತ್ತು ಲೇಡಿ ಕರ್ಜನ್‌ ಆಸ್ಪತ್ರೆ, ಮಿಂಟೋ ಕಣ್ಣಾಸ್ಪತ್ರೆ, ಎಸ್‌ಡಿಎಸ್‌ ಟಿ.ಬಿ. ಆಸ್ಪತ್ರೆಗೆ ಬೇಕಾಗುವ ಹೆಚ್ಚಿನ ಸವಲತ್ತುಗಳನ್ನು ಒದಗಿಸುವುದು.

 

3) ಸೂಪರ್‌ ಸ್ಪೆಷಾಲಿಟಿ ವಿಭಾಗಗಳಲ್ಲಿರುವ ಮೂಲಭೂತ ಸವಲತ್ತುಗಳ ಕೊರತೆಯನ್ನು ಗಮನಿಸಿ ಆ ವಿಭಾಗಗಳಿಗೆ ಪ್ರತ್ಯೇಕ ಕಟ್ಟಡಗಳನ್ನು ನಿರ್ಮಿಸಿ ಅಲ್ಲಿಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ದೊರಕಿಸಿ ಉನ್ನತೀಕರಣಗೊಳಿಸುವುದು.

 

4) ನರ್ಸಿಂಗ್‌ ಕಾಲೇಜ್‌ ಮತ್ತು ನರ್ಸಿಂಗ್‌ ಹಾಸ್ಟೆಲ್‌ಗಳನ್ನು ಹೊಸದಾಗಿ ನಿರ್ಮಿಸುವುದು.

 

 • ಈ ಪರಿಕಲ್ಪನೆಗೆ ಕೇಂದ್ರ ಸರ್ಕಾರ ಅನುಮತಿಯನ್ನು ನೀಡಿತ್ತು.
 • ಈ ಯೋಜನೆಗೆ ಕೇಂದ್ರ ಸರ್ಕಾರ ಹೆಚ್‌ಎಲ್‌ಎಲ್‌ ಲೈಫ್‌ ಕೇರ್‌ (ಮುಂಚಿನ ಹಿಂದೂಸ್ಥಾನ್‌ ಲ್ಯಾಟೆಕ್ಸ್‌ ಲಿಮಿಟೆಡ್) ಸಂಸ್ಥೆಯನ್ನು ನಿಯೋಜಿಸಿ ಕಟ್ಟಡದ ಸಿವಿಲ್‌ ಕಾಮಗಾರಿಯನ್ನು ಕೈಗೊಂಡು ಮತ್ತು ಉಪಕರಣಗಳನ್ನು ಸರಬರಾಜು ಮಾಡಿ ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಲು ಆದೇಶ ನೀಡಿತ್ತು. ಇದರ ಕಾರ್ಯ ಒಂದು ಉಸ್ತುವಾರಿ ಸಮಿತಿ ಮೇಲ್ವಿಚಾರಣೆಯಲ್ಲಿ ನಡೆಯಿತು.
 • ಈ ಕಾರ್ಯಕ್ರಮ 2008 ಏಪ್ರಿಲ್‌ನಲ್ಲಿ ಪ್ರಾರಂಭಗೊಂಡು ಏಪ್ರಿಲ್‌ 2011 ರಲ್ಲಿ ಕಟ್ಟಡದ ಸಿವಿಲ್‌ ಕಾಮಗಾರಿ ಕಾರ್ಯ ಪೂರ್ಣಗೊಂಡಿತು.

 

ಸೂಪರ್ಸ್ಪೆಷಾಲಿಟಿ ಆಸ್ಪತ್ರೆ ಉನ್ನತೀಕರಣಗೊಳಿಸಲು ಕರ್ನಾಟಕ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳು :-

 

1) ಆಸ್ಪತ್ರೆ ಸಂಸ್ಥಾಪನೆ ಮೇಲ್ವಿಚಾರಣೆ ನೋಡಿಕೊಳ್ಳಲು ವಿಶೇಷಾಧಿಕಾರಿಗಳ ನೇಮಕ.

 

2) 317 ಹುದ್ದೆಗಳ ಸೃಜನೆ.

 

ಅ)

ಅರವಳಿಕೆ, ಕ್ಷ-ಕಿರಣ ಹಾಗೂ ನರವೈದ್ಯ ಶಾಸ್ತ್ರ ವಿಭಾಗದಲ್ಲಿ ಭೋದಕ ಹುದ್ದೆಗಳು 

  14

ಆ)

ರೆಸಿಡೆಂಟ್‌ ಹುದ್ದೆಗಳು

  16

ಇ)

ಪ್ಯಾರಾ ಮೆಡಿಕಲ್‌ ಹುದ್ದೆಗಳು (ಶುಶ್ರೂಷಕರು, ವಿವಿಧ ತಂತ್ರಜ್ಞರು ಹಾಗೂ ಆಡಳಿತ ವರ್ಗ)

287

 

ಒಟ್ಟು 

317

 

3) ಮಿಕ್ಕ ಸೌಕರ್ಯಗಳನ್ನು ಗುತ್ತಿಗೆ ಆಧಾರದ ಮೇಲೆ ಪಡೆಯುವುದು. 

 

4) ಇಡೀ ಆಸ್ಪತ್ರೆಯು ಸಂಪೂರ್ಣ ಹವಾ ನಿಯಂತ್ರಣ ಸೌಲಭ್ಯವನ್ನು ಹೊಂದಿದೆ.

 

ಈ ಕೆಳಕಂಡಂತೆ ಹಾಸಿಗೆಗಳು ಲಭ್ಯವಿದೆ.

 

ವಿಭಾಗಗಳು

ಹಾಸಿಗೆಗಳು

ನರವೈದ್ಯ ಶಾಸ್ತ್ರ ವಿಭಾಗ 

30  ಹಾಸಿಗೆಗಳು

(20 +5 ಹೆಚ್‌ಡಿಯು + 5 ಪಾರ್ಶ್ವವಾಯು ತೀವ್ರ ನಿಗಾ ಘಟಕಗಳು)

ನರಶಸ್ತ್ರ ಚಿಕಿತ್ಸಾ ವಿಭಾಗ 

30 ಹಾಸಿಗೆಗಳು

(20 + 5 ಹೆಚ್‌ಡಿಯು + 5 ತೀವ್ರ ನಿಗಾ ಘಟಕಗಳು)

ಹೃದ್ರೋಗ ಶಾಸ್ತ್ರ ವಿಭಾಗ 

30 ಹಾಸಿಗೆಗಳು

(20 + 5 ಹೆಚ್‌ಡಿಯು + 5 ಸಿಸಿಯುಗಳು)

ಸುರೂಪಿಕ ಶಸ್ತ್ರ ಚಿಕಿತ್ಸಾ ವಿಭಾಗ 

30 ಹಾಸಿಗೆಗಳು

(20 + 5 ಹೆಚ್‌ಡಿಯು + 5 ತೀವ್ರ ನಿಗಾ ಘಟಕಗಳು)

ಶಿಶು ಶಸ್ತ್ರ ಚಿಕಿತ್ಸಾ ವಿಭಾಗ 

38 ಹಾಸಿಗೆಗಳು

(24+2 ಬೇಬಿ ವಾರ್ಮರ್‌ಗಳು +6 ಹೆಚ್‌ಡಿಯು +6 ತೀವ್ರ ನಿಗಾ ಘಟಕಗಳು)

ಉದರ ಶಸ್ತ್ರ ಚಿಕಿತ್ಸಾ ಹಾಗೂ 

ಯಕೃತ್‌ ಕಸಿ ವಿಭಾಗ

30 ಹಾಸಿಗೆಗಳು

(20 + 5 ಹೆಚ್‌ಡಿಯು + 5 ತೀವ್ರ ನಿಗಾ ಘಟಕಗಳು)

ವಿಶೇಷ ಕೊಠಡಿಗಳು 

15

(5+ ವಿಶೇಷ + 10 ಅರೆ ವಿಶೇಷ ಕೊಠಡಿಗಳು)

        ಒಟ್ಟು       

203

 

    ಅತ್ಯಾಧುನಿಕ ಶಸ್ತ್ರ ಚಿಕಿತ್ಸಾ ಕೊಠಡಿ (.ಟಿ)           6

                                                         ಒಟ್ಟು ವಿಸ್ತೀರ್ಣ      14,626 ಚದುರ ಮೀ.

ಇತ್ತೀಚಿನ ನವೀಕರಣ​ : 16-12-2021 03:16 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080