ಅಭಿಪ್ರಾಯ / ಸಲಹೆಗಳು

ಪರಿಚಯ

ವಿಭಾಗದ ಬಗ್ಗೆ

       ಬಿ.ಎಂ.ಸಿ.ಆರ್.ಐ ನರಶಸ್ತ್ರ ಚಿಕಿತ್ಸಾ ವಿಭಾಗವು ಕರ್ನಾಟಕದ ಜನತೆಗೆ ಮಾತ್ರವಲ್ಲದೆ, ಇತರ ರಾಜ್ಯಗಳ ಮತ್ತು ಅಂತಾರಾಷ್ಟ್ರೀಯ ರೋಗಿಗಳಿಗೂ ಸಹ ಉತ್ಕೃಷ್ಟ ಸೇವೆಯನ್ನು ಸಲ್ಲಿಸುತ್ತಿದೆ. ಹಿಂದಿನ ನಾಯಕರು ಮತ್ತು ಇಲಾಖೆಯ ಮುಖ್ಯಸ್ಥ ಚಂದ್ರಮೌಳೀಶ್ ಅವರ ನೇತೃತ್ವದಲ್ಲಿ ಪ್ರಾರಂಭವಾಗಿದ್ದು, 2011ರವರೆಗೆ ಡಾ.ಜಿ.ವಿ.ರೆಡ್ಡಿ ಅವರ ನಂತರ ಡಾ.ಎಸ್.ಬಾಲಾಜಿ ಪೈ ಅವರ ನೇತೃತ್ವದಲ್ಲಿ 2011ರಿಂದ ಇಲ್ಲಿಯವರೆಗೆ ಈ ಶಸ್ತ್ರಚಿಕಿತ್ಸೆಯ ವಿಭಾಗವು ಕಾರ್ಯನಿರ್ವಹಿಸುತ್ತಿದ್ದೆ. ಆರಂಭದಿಂದಲೂ ರಸ್ತೆ ಅಪಘಾತದತಲೆಯ ಗಾಯರೋಗಿಗಳಿಗೆ ಮತ್ತು ಕೆಲವು ಸರಳ ನರಶಸ್ತ್ರಚಿಕಿತ್ಸಾ ವಿಧಾನಗಳಿಗೆ ಸೇವೆಯನ್ನು ನೀಡುತ್ತಿದ್ದು, ಆದರೆ 2012ರ ನಂತರ ಹೊಸ ಸೂಪರ್ ಸ್ಪೆಷಾಲಿಟಿ ಬ್ಲಾಕ್ (ಪಿಎಮ್ಎಸ್ಎಸ್‌ವೈ) ನೊಂದಿಗೆ ಇಲಾಖೆಯು ಎಲ್ಲಾ ರೀತಿಯ ವೈವಿಧ್ಯಮಯ ಶಸ್ತ್ರ ಚಿಕಿತ್ಸೆಗಳನ್ನು ಮಾಡುತ್ತಿದ್ದೆವೆ. 2013ರಲ್ಲಿ ನಮ್ಮ ವಿಭಾಗದ ಮುಖ್ಯಸ್ಥರು ಡಾ.ಎಸ್.ಬಾಲಾಜಿ ಪೈ ನೇತೃತ್ವದಲ್ಲಿ ಟ್ರಾಮಾ ಸೆಂಟರ್ ಆರಂಭವಾಗಿದ್ದು, 10 ತೀವ್ರ ನಿಗಾ ಘಟಕ ಮತ್ತು 10 ಸಾಮಾನ್ಯ ಹಾಸಿಗೆಗಳನ್ನು ತಲೆಗೆ ತೀವ್ರ ಗಾಯವಾಗಿರುವ ರೋಗಿಗಳಿಗೆ ಮೀಸಲಿಡಲಾಗಿದೆ. 2009ರಲ್ಲಿ 72 ಶಸ್ತ್ರಚಿಕಿತ್ಸೆಗಳಿಂದ 2019ರಲ್ಲಿ 967 ಎಲ್ಲಾ ರೀತಿಯ ಶಸ್ತ್ರಚಿಕಿತ್ಸೆಯನ್ನು ಹೆಚ್ಚಿಸಿದ್ದೇವೆ. ನಮ್ಮ ಶಸ್ತ್ರಚಿಕಿತ್ಸೆಯ ಪ್ರತಿಪಾದನೆಯು ರಾಷ್ಟ್ರೀಯ & ಅಂತಾರಾಷ್ಟ್ರೀಯ ನರ ಶಸ್ತ್ರಚಿಕಿತ್ಸೆಯ   ಸಂಸ್ಥೆಗಳಷ್ಟೇ ಸರಿಸಮಾನವಾಗಿದೆ. ಸಾಮನ್ಯ ನರಶಸ್ತ್ರ ಚಿಕಿತ್ಸೆಗಳು ಹೊರತು ಪಡಿಸಿ ವ್ಯೆವಿದ್ಯಮಯ ಹಾಗೂ ಅತೀ ಸೂಕ್ಷ್ಮವಾದ ಮೆದುಳು ಹಾಗೂ ಬೆನ್ನೆಲುಬಿನ(ಬೆನ್ನು ಹುರಿ) ಶಸ್ತ್ರ ಚಿಕಿತ್ಸೆಗಳು, ಉದಾಹರೆಣೆ:- ಕಾಂಪ್ಪೆಕ್ಸ್ ಪೈನ್ , ಫಂಕ್ಷನಲ್ ಹಾಗೂ ಎಂಡೋವಾಸ್ಕುಲಾ ಚಿಕಿತ್ಸೆಗಳನ್ನು ಮಾಡುತ್ತಿದ್ದೇವೆ. ನಮ್ಮ ವಿಭಾಗದಲ್ಲಿ 20 ಸಾಮಾನ್ಯ ನರಶಸ್ತ್ರ ಚಿಕಿತ್ಸಾ ಹಾಸಿಗೆಗಳು. 5 ತೀವ್ರ ನಿಗಾ ಘಟಕ, 5  ಎಚ್‌ಡಿಯು ಹಾಸಿಗೆಗಳು 24 /7 ತುರ್ತು ನರಶಸ್ತ್ರ ಚಿಕಿತ್ಸಾ ಸೇವೆಯನ್ನು ಕೂಡುತ್ತಿದ್ದೇವೆ. ನಮ್ಮಲ್ಲಿ 2015ರಿಂದ ಪ್ರತಿ ವರ್ಷ ಎರಡು ಎಂ.ಸಿ.ಎಚ್ ಪದವಿಯು ಪ್ರಾರಂಭವಾಗಿದ್ದು, ಇದುವರೆಗೆ 8 ಮಂದಿ ಎಂ.ಸಿ.ಎಚ್ ಪದವಿ ಪಡೆದಿದ್ದಾರೆ. ಪ್ರಮುಖ ಸಂಶೋಧನಾ ಲೇಖನಗಳನ್ನು ರಾಷ್ಟ್ರೀಯ & ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.

ಬೋಧಕ ಸಿಬ್ಬಂದಿ

ಕ್ರ.ಸಂ

ಹೆಸರು

ಅರ್ಹತೆ

ಹುದ್ದೆ

 1

 ಡಾ.ಎಸ್.ಬಾಲಾಜಿ ಪೈ

 ಎಂಬಿಬಿಎಸ್, ಡಿ.ಎನ್.ಬಿ

 ಪ್ರಾಧ್ಯಾಪಕರು ಮತ್ತು ವಿಭಾಗದ ಮುಖ್ಯಸ್ಥರು

 2

 ಡಾ.ಅಮರೇಶ್ . ಎಸ್. ಬಿ

 ಎಂಬಿಬಿಎಸ್, ಎಂಎಸ್, ಎಂ.ಸಿ.ಎಚ್ (ಕೆಇಎಂ ಮುಂಬೈ)

 ಪ್ರಾಧ್ಯಾಪಕರು

 3

 ಡಾ. ನಾಗೇಶ

 ಎಂಬಿಬಿಎಸ್, ಎಂಎಸ್,  ಎಂ.ಸಿ.ಎಚ್ (ನಿಮ್ಹಾನ್ಸ್)

 ಸಹ ಪ್ರಾಧ್ಯಾಪಕರು

 4

 ಡಾ.ವಿಕಾಸ್ ನಾಯಕ್

 ಎಂಬಿಬಿಎಸ್, ಎಂ.ಸಿ.ಎಚ್ (ಏಮ್ಸ್, ನವದೆಹಲಿ)

 ಸಹಾಯಕ ಪ್ರಾಧ್ಯಾಪಕರು

 5

 ಡಾ.ಶ್ರೀ ಹರಿ ಬಿ. ಜಿ.

 ಎಂಬಿಬಿಎಸ್, ಎಂಎಸ್, ಎಂ.ಸಿ.ಎಚ್ (ಬಿಎಂಸಿಆರ್ ಐ)

 ಸಹಾಯಕ ಪ್ರಾಧ್ಯಾಪಕರು

 6

 ಡಾ.ನಾಗಾರ್ಜುನ್‌

 ಎಂಬಿಬಿಎಸ್, ಎಂ.ಸಿ(ನಿಮ್ಹಾನ್ಸ್)

 ಸಹಾಯಕ ಪ್ರಾಧ್ಯಾಪಕರು

 

 

ಬೋಧಕೇತರ ಸಿಬ್ಬಂದಿ

 

ಕ್ರ.ಸಂ

ಹೆಸರು

ಹುದ್ದೆ

1

ಮಹೇಶ ಟಿ.ಆರ್

ಫಿಸಿಯೋಥೆರಪಿಸ್ಟ್

2

ನಿರುಪಮಾ ಸಿ

ಫಿಸಿಯೋಥೆರಪಿಸ್ಟ್

 

 

ಶೈಕ್ಷಣಿಕ ಮತ್ತು ಸಂಶೋಧನಾ ಚಟುವಟಿಕೆಗಳು: ವೀಕ್ಷಣೆ

 

 ಇತ್ತೀಚಿನ ನವೀಕರಣ​ : 28-09-2022 01:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080