ಅಭಿಪ್ರಾಯ / ಸಲಹೆಗಳು

ಸೌಲಭ್ಯಗಳು ಮತ್ತು ಶಸ್ತ್ರಚಿಕಿತ್ಸೆಗಳು

ಸೌಲಭ್ಯಗಳು ಮತ್ತು ಶಸ್ತ್ರಚಿಕಿತ್ಸೆಗಳು:

ನಮ್ಮ ವಿಭಾಗವು ಮಕ್ಕಳ ಶಸ್ತ್ರಚಿಕಿತ್ಸೆಗಾಗಿ ಅತ್ಯಾಧುನಿಕ ಸುಸಜ್ಜಿತ ಸೌಲಭ್ಯಗಳನ್ನು ಹೊಂದಿದೆ. ಉದಾಹರಣೆಗೆ:

  • ಮಿನಿಮಲ್‌ ಆಕ್ಸೆಸ್‌ ಉಪಕರಣಗಳು -2 
  • ನವಜಾತ ಮತ್ತು ಮಕ್ಕಳ ಮೂತ್ರ ಶಸ್ತ್ರಚಿಕಿತ್ಸಾ ಉಪಕರಣಗಳು
  • (ಸಿಸ್ಟೊಸ್ಕೋಪ್, ರೆಸೆಕ್ಟೊಸ್ಕೋಪ್,ಯುರೆಟರೊ-ರೀನೋಸ್ಕೋಪ್‌ಗಳು )
  • ಗ್ಯಾಸ್ಟ್ರೋಸ್ಕೋಪ್, ಕೊಲೊನೋಸ್ಕೋಪ್ ಮತ್ತು ಇ.ಆರ್.‌ಸಿ.ಪಿ ಸ್ಕೋಪ್‌ಗಳು
  • ಲೇಸರ್
  • ಹಾರ್ಮೋನಿಕ್ ಸ್ಕಾಲ್ಪೆಲ್ ಮತ್ತು ವೆಸಲ್ ಸೀಲಿಂಗ್ ಉಪಕರಣಗಳು
  • ವೀಡಿಯೊ ಯುರೋಡೈನಾಮಿಕ್ಸ್‌, ಜೀರ್ಣಾಂಗ ವ್ಯವಸ್ಥೆ (ಜಿಐ) ಮಾನೋಮೆಟ್ರಿ
  • ಸಿ-ಆರ್ಮ್

ಬಿಎಂಸಿಆರ್‌ಐ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶಿಶು ಶಸ್ತ್ರ ಚಿಕಿತ್ಸಾ ವಿಭಾಗವು 24  ಹಾಸಿಗೆಗಳ ಸಾಮಾನ್ಯ ವಾರ್ಡ್‌, 6 ಹಾಸಿಗೆಗಳ ಸುಸಜ್ಜಿತ ಹೈ ಡಿಪೆಂಡೆನ್ಸಿ ಯುನಿಟ್ ಮತ್ತು 6 ಓಪನ್ ವಾರ್ಮರ್, ಮಲ್ಟಿಪಾರಾ ಮಾನಿಟರ್ ಮತ್ತು ಫೋಟೊಥೆರಪಿ ಘಟಕಗಳನ್ನೊಳಗೊಂಡ ಸುಸಜ್ಜಿತ ನವಜಾತ ಶಸ್ತ್ರಚಿಕಿತ್ಸಾ ತೀವ್ರನಿಗಾ ಘಟಕ (ನಿಯೋನಾಟಲ್ ಸರ್ಜಿಕಲ್ ಐಸಿಯು)ಗಳನ್ನು  ಹೊಂದಿದೆ.

ವಿಭಾಗವು ಮಕ್ಕಳ ಅವಶ್ಯಕವಾದ ಎಲ್ಲಾ ಶಸ್ತ್ರಚಿಕಿತ್ಸೆ ಸೌಲಭ್ಯಗಳನ್ನೊದಗಿಸುತ್ತಿದ್ದು ಕೆಲವನ್ನು ಇಲ್ಲಿ ಹೆಸರಿಸಲಾಗಿದೆ:

  • ಮಕ್ಕಳ ಸಾಮಾನ್ಯ ಮತ್ತು ಉದರಶಸ್ತ್ರ ಚಿಕಿತ್ಸೆ - ಜನ್ಮಜಾತ ಜೀರ್ಣಾಂಗದ ಅಡಚಣೆಗಳು, ಹರ್ಷ್‌ಸ್ಪ್ರಂಗ್ ಕಾಯಿಲೆ, ಗುದನಾಳ/ಗುದದ್ವಾರದ ಕಾಯಿಲೆಗಳು ಇತ್ಯಾದಿ.
  • ಮಕ್ಕಳ  ಮೂತ್ರಶಾಸ್ತ್ರ ಮತ್ತು ಯುರಾಲಜಿ ಕ್ಲಿನಿಕ್- ಮಕ್ಕಳ ಮೂತ್ರಾಂಗಗಳಿಗೆ ಸಂಬಂಧಪಟ್ಟ ಎಲ್ಲಾ ಕಾಯಿಲೆಗಳು ಉದಾಹರಣೆಗೆ,  ಅಬ್ಸ್ಟ್ರಕ್ಟಿವ್ ಹೈಡ್ರೋನೆಫ್ರೋಸಿಸ್, ವೆಸೈಕೋ-ಯುರೆಟರಿಕ್ ರಿಫ್ಲಕ್ಸ್(VUR), ಪೋಸ್ಟೀರಿಯರ್ ಯುರೆತ್ರಲ್ ವಾಲ್ವ್ಸ್(PUV), ‌ನ್ಯೂರೋಜೆನಿಕ್ ಬ್ಲಾಡರ್‌ ಇತ್ಯಾದಿ.ವಿಭಾಗವು ಈ ಕಾಯಿಲೆಗಳಿಗೆ ಅತ್ಯವಶ್ಯಕವಾದ ವಿಕಿರಣಾ ಪರೀಕ್ಷೆಗಳು ಹಾಗೂ ಯುರೊಡೈನಾಮಿಕ್‌ ಪರೀಕ್ಷೆಗಳನ್ನು ತಾನೇ ನಿರ್ವಹಿಸುತ್ತದೆ. 
  • ಯಕೃತ್ತು, ಪಿತ್ತನಾಳ ಮತ್ತು ಮೇದೋಜ್ಜೀರಕಾಂಗ - ಪಿತ್ತನಾಳ ಅಡಚಣೆ , ಖೋಲೆಡೋಖಲ್ ಸಿಸ್ಟ್, ‌ಕ್ಯಾನ್ಸರ್‌ ಕಾಯಿಲೆಗಳು.
    • ಮೇದೋಜ್ಜೀರಕ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗೆ ಅತ್ಯಧಿಕ ಸಂಖ್ಯೆಯಲ್ಲಿ ಚಿಕಿತ್ಸೆ ನೀಡುವ ಕೇಂದ್ರಗಳಲ್ಲಿ ನಮ್ಮ ವಿಭಾಗವು ಕೂಡ ಒಂದು.
  • ಮಕ್ಕಳ ಮೆದುಳು ಮತ್ತು ಬೆನ್ನುಹುರಿ ಶಸ್ತ್ರಚಿಕಿತ್ಸೆ - ಮಕ್ಕಳ ಮೆದುಳು ಮತ್ತು ಬೆನ್ನುಹುರಿ ಶಸ್ತ್ರಚಿಕಿತ್ಸೆ ನಡೆಸುವ ಏಕೈಕ ಸಂಸ್ಥೆ ನಮ್ಮದಾಗಿದೆ. ಮಕ್ಕಳ ಬೆನ್ನುಹುರಿ ಶಸ್ತ್ರಚಿಕಿತ್ಸೆಯನ್ನು ರಾಜ್ಯದಲ್ಲೇ ಅತ್ಯಧಿಕ ಸಂಖ್ಯೆಯಲ್ಲಿ ನಡೆಸುತ್ತಿರುವ ಕೀರ್ತಿ ನಮ್ಮ ವಿಭಾಗಕ್ಕೆ ಸಲ್ಲುತ್ತದೆ. 
  • ಮಕ್ಕಳ ಎದೆ ಮತ್ತು ಶ್ವಾಸನಾಳದ ಶಸ್ತ್ರಚಿಕಿತ್ಸೆ.

ಇತ್ತೀಚಿನ ನವೀಕರಣ​ : 30-09-2022 04:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080