ಅಭಿಪ್ರಾಯ / ಸಲಹೆಗಳು

ಎನ್ಎಬಿಹೆಚ್ ‌

ಆಸ್ಪತ್ರೆಗಳು ಮತ್ತು ಆರೋಗ್ಯ ಸೇವೆಯನ್ನು ಒದಗಿಸುವ ರಾಷ್ಟ್ರೀಯ ಮಾನ್ಯತಾ ಮಂಡಳಿ (ಎನ್ಎಬಿಎಚ್)

 

ಆಸ್ಪತ್ರೆಗಳು ಮತ್ತು ಆರೋಗ್ಯ ಸೇವೆಯನ್ನು ಒದಗಿಸುವ ರಾಷ್ಟ್ರೀಯ ಮಾನ್ಯತಾ ಮಂಡಳಿ (ಎನ್‌ಎಬಿಹೆಚ್‌) ಎಂಬುದು ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ (ಕ್ಯೂಸಿಐ) ನ ಒಂದು ಅಂಗಸಂಸ್ಥೆಯಾಗಿದೆ ಹಾಗೂ ಇದು ಹೆಲ್ತ್ ಕೇರ್ ಸಂಸ್ಥೆಗಳ ಮಾನ್ಯತೆ ಕಾರ್ಯಕ್ರಮವನ್ನು ಸ್ಥಾಪಿಸಲು ಮತ್ತು ನಿರ್ವಹಿಸಲು ಸ್ಥಾಪಿಸಲಾಗಿರುತ್ತದೆ.

 

ಆಸ್ಪತ್ರೆಗಳು ಮತ್ತು ಆರೋಗ್ಯ ಸೇವೆಯನ್ನು ಒದಗಿಸುವ ರಾಷ್ಟ್ರೀಯ ಮಾನ್ಯತಾ ಮಂಡಳಿ (ಎನ್‌ಎಬಿಹೆಚ್‌) ಒಂದು ರಾಷ್ಟ್ರೀಯ ಗುಣಮಟ್ಟದ ವಿಮರ್ಶಣಾ ಮಂಡಳಿಯಾಗಿರುತ್ತದೆ.

 

ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ)ಯು ಮೇ 2016ರಲ್ಲಿ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾದ (ಕ್ಯೂಸಿಐ) ಆಸ್ಪತ್ರೆಗಳು ಮತ್ತು ಆರೋಗ್ಯ ಸೇವೆಯನ್ನು ಒದಗಿಸುವ ರಾಷ್ಟ್ರೀಯ ಮಾನ್ಯತಾ ಮಂಡಳಿ (ಎನ್‌ಎಬಿಹೆಚ್‌) ನಿಂದ ಮಾನ್ಯತೆಯನ್ನು ಪಡೆದಿರುತ್ತದೆ.

ರಾಜ್ಯದಲ್ಲಿ ಎನ್ಎಬಿಹೆಚ್ನಿಂದ ಮಾನ್ಯತೆ ಪಡೆದ ಪ್ರಥಮ ಸರ್ಕಾರಿ ಆಸ್ಪತ್ರೆ ಆಗಿರುತ್ತದೆ ಹಾಗೂ ಮಾನ್ಯತೆಯು 13ನೇ ಮೇ 2016 ರಿಂದ 12ನೇ ಮೇ 2018 & 15ನೇ ನವೆಂಬರ್‌  2017 ರಿಂದ 14ನೇ ನವೆಂಬರ್‌ 2019 ರವರೆಗೆ ಜಾರಿಯಲ್ಲಿರುತ್ತದೆ.

 

ಈ ಮಾನ್ಯತೆಯು ಸಂಸ್ಥೆಯ ಸಿಬ್ಬಂದಿಗಳ ಬದ್ದತೆ,ಸಮರ್ಪಣೆ,ಅತ್ತ್ಯುತ್ತಮ ವೈಜ್ಞಾನಿಕ ಪದ್ದತಿಗಳು, ಆಡಳಿತಾತ್ಮಕ ತಿದ್ದುಪಡಿಗಳು ಮತ್ತು ವ್ಯವಸ್ಥಿತ ಅನುಷ್ಠಾನದಿಂದ ಮಾತ್ರ ಸಾಧ್ಯವಾಗಿದೆ. ಮಾನ್ಯತೆಯನ್ನು ಪಡೆಯುವಲ್ಲಿ ವಿವಿಧ ನಿಯತಾಂಕಗಳನ್ನು ತೆಗೆದುಕೊಳ್ಳಲಾಗುವುದು - ಅವುಗಳಲ್ಲಿ ಗುಣಮಟ್ಟದ ಚಿಕಿತ್ಸೆ, ಉತ್ತಮ ಆರೈಕೆ, ಸಮನಾದ ಚಿಕಿತ್ಸಾ ವಿಧಾನ ಮತ್ತು ಮಾರ್ಗಸೂಚಿ, ಶುಶ್ರೂಷಣೆ, ನೈರ್ಮಲ್ಯ, ಸೋಂಕು ನಿಯಂತ್ರಣ, ಮೂಲಭೂತ ಸೌಕರ್ಯಗಳ ವಿರ್ವಹಣೆ, ಕ್ರಮಬದ್ಧ ವೈದ್ಯಕೀಯ ಚಿಕಿತ್ಸೆ, ಜೌಷಧಾಲಯ, ಅಗ್ನಿ ಸುರಕ್ಷತಾ ಕ್ರಮಗಳು, ಸೂಕ್ತ ರೀತಿಯಲ್ಲಿ ದಾಖಲೆಗಳ ನಿರ್ವಹಣೆ ಮುಂತಾದವುಗಳು ಈ ಪ್ರಕ್ರಿಯೆಯಲ್ಲಿ ಒಳಗೊಂಡಿರುತ್ತವೆ. 

  

ಗುರಿ

 

 1. ಗುಣಮಟ್ಟ, ರೋಗಿಯ ಸುರಕ್ಷತೆ, ದಕ್ಷತೆ ಮತ್ತು ರೋಗಿಯ ಆರೈಕೆಯ ಬಗ್ಗೆ  ಹೊಣೆಗಾರಿಕೆಯ ಸಂಸ್ಕೃತಿಯನ್ನು ಸೃಷ್ಟಿಸುವ ಬದ್ಧತೆ.
 2.  ರೋಗಿಯ ಸುರಕ್ಷತೆ, ವೈದ್ಯಕೀಯ ಫಲಿತಾಂಶಗಳು, ವೈದ್ಯಕೀಯ ದಾಖಲೆಗಳು, ಸೋಂಕು ನಿಯಂತ್ರಣ ಮತ್ತು ಸಿಬ್ಬಂದಿಗಾಗಿ ರಾಷ್ಟ್ರೀಯ/ಅಂತಾರಾಷ್ಟ್ರೀಯ ಮಾನದಂಡಗಳ ಪ್ರಕಾರ ಶಿಷ್ಟಾಚಾರಗಳು ಮತ್ತು ನೀತಿಗಳನ್ನು ಸ್ಥಾಪಿಸುವುದು.
 3. ರೋಗಿಗಳನ್ನು ಎಲ್ಲ ಕಾಲದಲ್ಲೂ ಗೌರವ ಮತ್ತು ಸೌಜನ್ಯದಿಂದ ನಡೆಸಿಕೊಳ್ಳಲಾಗುತ್ತದೆ.
 4. ರೋಗಿಗಳು ಆರೈಕೆ ಯೋಜನೆ ನಿರ್ಧಾರ ಕೈಗೊಳ್ಳುವಲ್ಲಿ ತೊಡಗಿಸಿಕೊಂಡಿರುತ್ತಾರೆ. 
 5. ಅರ್ಹ ಮತ್ತು ತರಬೇತಿ ಪಡೆದ ಸಿಬ್ಬಂದಿಯಿಂದ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ.
 6. ರೋಗಿಗಳಿಂದ ಪ್ರತಿಕ್ರಿಯೆಯನ್ನು ಪಡೆಯಲಾಗುತ್ತದೆ ಮತ್ತು ದೂರುಗಳನ್ನು (ಏನಾದರೂ ಇದ್ದಲ್ಲಿ) ಪರಿಹರಿಸಲಾಗುತ್ತದೆ.
 7. ಬಿಲ್ಲಿಂಗ್ ಮತ್ತು ದರ ಪಟ್ಟಿಯ ಲಭ್ಯತೆಯಲ್ಲಿ ಪಾರದರ್ಶಕತೆ. ಸುಧಾರಣೆಗಾಗಿ ಅದರ ಸೇವೆಗಳ ನಿರಂತರ ಮೇಲ್ವಿಚಾರಣೆ.
 8. ಸಂಭವಿಸಬಹುದಾದ ಪ್ರತಿಕೂಲ ಘಟನೆಗಳನ್ನು ತಡೆಗಟ್ಟುವ ಬದ್ಧತೆ.

 

 

 ಸೋಂಕು ತಡೆಗಟ್ಟವಿಕೆ ಮತ್ತು ಅಭ್ಯಾಸ ವಿಭಾಗದ ಅಡಿಯಲ್ಲಿ ನೆಡೆದ ೫ನೇ ಅಂತರಾಷ್ಟ್ರೀಯ ರೋಗಿಗಳ ಸುರಕ್ಷತಾ ಕಾಂಗ್ರೆಸ್‌ - 2015 ರ ಸಮಯದಲ್ಲಿ ಕರ್ನಾಟಕ ಸರ್ಕಾರದ ಗೌರವಾನ್ವಿತ ಶ್ರೀ.ಯು.ಟಿ. ಖಾದರ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಬಿಎಂಸಿ&ಆರ್‌ಐ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ (ಪಿಎಂಎಸ್‌ಎಸ್‌ವೈ)ಗೆ ಪ್ರಶಸ್ತಿ ಪ್ರಧಾನ ಮಾಡಿದ ಸಮಯ.  

 

 

 


ಭಾರತದಲ್ಲಿ ಎನ್‌ಎಬಿಹೆಚ್‌ ಸೇಫ್-೧ ನಿಂದ ಪ್ರಮಾಣೀಕರಿಸಲ್ಪಟ್ಟ ರಾಜ್ಯ ಸರ್ಕಾರದ ಅಡಿಯಲ್ಲಿರುವ ಪ್ರಥಮ ಸರ್ಕಾರಿ ಆಸ್ಪತ್ರೆ ಬಿಎಂಸಿ&ಆರ್‌ಐ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ(ಪಿಎಂಎಸ್‌ಎಸ್‌ವೈ) ಆಗಿರುತ್ತದೆ.

 

 

 

ಇತ್ತೀಚಿನ ನವೀಕರಣ​ : 22-12-2022 01:32 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080